ಡಾ.ರಾಜ್‌ಕುಮಾರ್ ಚಿತ್ರಗಳ ಒಂದು ನೋಟ
*ಅಬ್ಬಾ ಆ ಹುಡುಗಿ*
ಶ್ರೀ ಜಮುನಾ ಫಿಲಂಸ್ ಲಾಂಛನದಲ್ಲಿ 1959 ರಲ್ಲಿ ತೆರೆಕಂಡ ಡಾ.ರಾಜ್ ಅಭಿನಯದ ಹದಿನಾಲ್ಕನೆಯ ಚಿತ್ರ ಅಬ್ಬಾ ಆ ಹುಡುಗಿ
ಯಾರಪ್ಪ ಆ ಹುಡುಗಿಯೆಂದರೆ ಮೈನಾವತಿ ಅವಳಿಗಾಗಿ ಹಿಂದೆ ಬಿಳುವ ನಾಯಕ ರಾಜಶಂಕರ್
ಈ ಹುಡುಗಿಯ ಕಥೆ ಬರೆದು ನಿರ್ಮಾಣ ಮಾಡಿ ನಿರ್ದೆಶನ ಮಾಡಿರುವವರು...ಹೆಚ್.ಎಲ್.ಎನ್.ಸಿಂಹ ಅವರು
ಈ ಚಿತ್ರದಲ್ಲಿ ಡಾ.ರಾಜ್‌ಕುಮಾರ್ 2ನೇ ಹೀರೋ... ಚಿತ್ರದಲ್ಲಿ ಹೆಚ್ಚಾಗಿ ಬರುವುದೇ ಇಲ್ಲ... ಈ ನಾಯಕಿ ಪ್ರಧಾನ ಹಾಸ್ಯ ಚಿತ್ರ ದ ಮೊದಲ ಹೀರೋ ರಾಜ್‌ಶಂಕರ್ ಅವರು
ರಾಜ್‌ಕುಮಾರ್ ಅವರನ್ನು ಚಿತ್ರರಂಗಕ್ಕೆ ಕರೆತಂದ ಹೆಚ್.ಎಲ್.ಎನ್. ಸಿಂಹ ಅವರೇ ಈ ಚಿತ್ರದ ಹಾಡಗಳನ್ನು ಕೂಡ ಬರೆದಿದ್ದಾರೆ ,ವಿಶೇಷ ವೆಂದರೆ ಈ ಚಿತ್ರದ ಸಂಗೀತ ನಿರ್ದೇಶನ ಮಾಡಿದವರು ಹೆಸರಾಂತ ಗಾಯಕ ಪಿ.ಕಾಳಿಂಗರಾವ್ ಅವರು, ......
ಎಸ್.ಜಾನಕಿ,ಪಿ.ಬಿ.ಎಸ್., ಜಿಕ್ಕಿ,ಮೋಹನ್‌ಕುಮಾರಿಹಾಗೂ ಕಾಳಿಂಗರಾಯರು ಹಾಡುಗಳಿಗೆ ದನಿ ನೀಡಿದ್ದಾರೆ
ಹಾಡುಗಳು ಒಂದಕ್ಕಿಂತ ಒಂದು ಮನಸ್ಸೆಳೆಯುತ್ತವೆ...
ಹಾಗೂ ಈ ಹಾಡುಗಳು ಕೇಳಲು ಸಿಗುವುದು ಕಷ್ಟ...ಏಕೆಂದರೆ ಇದರ ವಿಡಿಯೋ ತುಂಬಾ ಹಾಳಗಿದೆ..ತುಂಬಾ ಕಟ್ ಹಾಗಿದೆ ಸಿನೆಮಾ ದ ಸಂಭಾಷಣೆ ಕೂಡ ಅರ್ದಂಬರ್ದ...ಎರಡೂ ಬಾರಿ ಸಿನೆಮಾ ನೋಡಿದರೂ ಅರ್ಥ ಮಾಡಿಕೊಳ್ಳಲು ತಿಣುಕಾಡಬೇಕು .... ಒಂದು ದೃಷ್ಯದಿಂದ ಮತ್ತೊಂದು ದೃಷ್ಯಕ್ಕೆ ಸಂಭಂದವೇ ಇರೋಲ್ಲ ಅಷ್ಟು ಕಟ್ ಆಗಿದೆ...ಹಾಡುಗಳೆಲ್ಲ ಅರೆಬರೆ....ಒಂದು ಸಮಾಧಾನವೆಂದರೆ ಇದರ ಎಲ್ಲ ಹಾಡುಗಳು ಮೊದಲೇ ನನ್ನ ಬಳಿ ಇರುವುದು (ಕೃಪೆ..ವಿರಾಮ್‌ಟೈಮ್ ಕಾಕತ್ಕರ್)
ಗಂಡಸೆಂದರೆ ಸಿಡಿಮಿಡಿಗೊಳ್ಳುವ, ಗಂಡು ಸಂತತಿಯನ್ನೆ ದ್ವೇಷಿಸುವ ಗರ್ವಿಷ್ಟೆ ನಾಯಕಿ ಶರ್ಮಿಷ್ಟೆ(ಮೈನಾವತಿ)
ಕನ್ಯಾಮಹಿಳಾ ಸಂಘ ಸ್ಥಾಪಿಸಿ, ಅದರಲ್ಲಿರುವ ಸದಸ್ಯರುಗಳ್ಯಾರು ವಿವಾಹವಗದಂತೆ ತಾಕೀತು ಮಾಡುತ್ತಿರುತ್ತಾಳೆ...ನಾಯಕಿಯ ತಂಗಿಯಾದ ಸರಸುಳನ್ನು ಸುರೇಶ್(ಡಾ.ರಾಜ್)ಪ್ರೀತಿಸುತ್ತಿರುತ್ತಾನೆ..ಇದಕ್ಕೆ ಹುಡುಗಿ ಹಾಗೂ ಅವಳ ತಂದೆಯ ಸಮ್ಮತಿ ಇದ್ದರೂ ನಾಯಕಿ ತಡೆ ಒಡ್ಡುತ್ತಿರುತ್ತಾಳೆ ಇದರಿಂದ ಭಗ್ನ ಪ್ರೇಮಿಯಾಗಿ ಸುರೇಶ್(ರಾಜ್) ತನ್ನ ಪ್ರೀತಿಗಾಗಿ ಪರಿತಪಿಸುತ್ತಿರುತ್ತಾನೆ
ಶರ್ಮಿಷ್ಟೆಯ ರೂಪಕ್ಕೆ ಜಂಭದ ಠೀವಿಗೆ ಮರುಳಾದ ನಾಯಕ ಸರ್ವೋತ್ತಮ್ (ರಾಜಶಂಕರ್)ಇವಳನ್ನೆ ವರಿಸಬೇಕೇಂದು ನಾನಾರೀತಿ ನಾಟಕವಾಡಿ ಅಂತೂ ಇಂತು ಅವಳನ್ನು ಮದುವೆಯಾಗುತ್ತಾನೆ..ನಂತರ ತಂಗಿಗೂ ಸುರೇಶ್ (ರಾಜ್) ಜೊತೆ ಮದುವೆಯಾಗುತ್ತೆ
ಆದರೂ ನಾಯಕಿ ಶರ್ಮಿಷ್ಟೆಯ ಗರ್ವ ಮಾತ್ರ ಇಳಿಯುವುದಿಲ್ಲ ನಾಯಕ ಏನು ಹೇಳಿದರೂ ವಿರುದ್ದ ಕೆಲಸ ಮಾಡುತ್ತಿರುತ್ತಾಳೆ...ಅವಳ ಜಂಬ ಇಳಿಸಲು ನಾಯಕ,... ನಾಟಕ ಕಲಾವಿದರ (ಪಂತಲು ಹಾಗೂ ಎಂ.ವಿ.ರಾಜಮ್ಮ )ಮೊರೆ ಹೋಗಿ ಅವಳಿಗೆ ಬುದ್ದಿ ಬರುವಂತೆ ಮಾಡಿ ಅವಳ ಜಂಭ ಇಳಿಸುತ್ತಾನೆ....
ಈ ಚಿತ್ರದಲ್ಲಿ ನಾಯಕಿಯ ಜೋರು ಎಷ್ಟೆಂದರೆ ಚಾಟಿ ಯಾವಾಗಲೂ ಕೈಯಲ್ಲಿ ಹಿಡಿದೇ ಇರುತ್ತಾಳೆ..ನಾಯಕನನ್ನು ಏಕವಚನದಲ್ಲೆ ನಿಂದಿಸುತ್ತಾಳೆ,ನಾಯಕನನ್ನ ಮನಸ್ಸೊ ಇಛ್ಚೆ ಥಳಿಸುತ್ತಾಳೆ😃
ಅದಕ್ಕೆ ಅನಿಸುತ್ತೆ ರಾಜ್‌ಕುಮಾರ್ ಅವರು ನಾಯಕನಾಗಿಲ್ಲ😃😃😃
ರಾಜ್ ಅಭಿನಯದ ಹಾಡುಗಳಂತೂ ಬಹಳ ಮಧುರವಾಗಿವೆ....
ಚಿತ್ರ ದ ಇತರ ತಾರಗಣದಲ್ಲಿ ಪಂಡರೀಬಾಯಿ, ಲೀಲಾವತಿ,ನರಸಿಂಹರಾಜು, ಡಿಕ್ಕಿಮಾದವರಾವ್,ಲೀಲಾಂಜಲಿ ಮುಂತಾದವರಿದ್ದಾರೆ....

ನಿಮ್ಮ ಡಿಸ್ಕ್ ಸಂಗ್ರಹದಲ್ಲಿ ಆದರ್ಶ ಸತಿಯ ಪಾಪಿಯ ಜೀವನ ಇದೆಯೇ?
ReplyDelete