ಡಾ.ರಾಜ್‌ಕುಮಾರ್ ಚಿತ್ರಗಳ ಒಂದು ನೋಟ
*ಅಬ್ಬಾ ಆ ಹುಡುಗಿ* ಶ್ರೀ ಜಮುನಾ ಫಿಲಂಸ್ ಲಾಂಛನದಲ್ಲಿ 1959 ರಲ್ಲಿ ತೆರೆಕಂಡ ಡಾ.ರಾಜ್ ಅಭಿನಯದ ಹದಿನಾಲ್ಕನೆಯ ಚಿತ್ರ ಅಬ್ಬಾ ಆ ಹುಡುಗಿ ಯಾರಪ್ಪ ಆ ಹುಡುಗಿಯೆಂದರೆ ಮೈನಾವತಿ ಅವಳಿಗಾಗಿ ಹಿಂದೆ ಬಿಳುವ ನಾಯಕ ರಾಜಶಂಕರ್ ಈ ಹುಡುಗಿಯ ಕಥೆ ಬರೆದು ನಿರ್ಮಾಣ ಮಾಡಿ ನಿರ್ದೆಶನ ಮಾಡಿರುವವರು...ಹೆಚ್.ಎಲ್.ಎನ್.ಸಿಂಹ ಅವರು ಈ ಚಿತ್ರದಲ್ಲಿ ಡಾ.ರಾಜ್‌ಕುಮಾರ್ 2ನೇ ಹೀರೋ... ಚಿತ್ರದಲ್ಲಿ ಹೆಚ್ಚಾಗಿ ಬರುವುದೇ ಇಲ್ಲ... ಈ ನಾಯಕಿ ಪ್ರಧಾನ ಹಾಸ್ಯ ಚಿತ್ರ ದ ಮೊದಲ ಹೀರೋ ರಾಜ್‌ಶಂಕರ್ ಅವರು ರಾಜ್‌ಕುಮಾರ್ ಅವರನ್ನು ಚಿತ್ರರಂಗಕ್ಕೆ ಕರೆತಂದ ಹೆಚ್.ಎಲ್.ಎನ್. ಸಿಂಹ ಅವರೇ ಈ ಚಿತ್ರದ ಹಾಡಗಳನ್ನು ಕೂಡ ಬರೆದಿದ್ದಾರೆ ,ವಿಶೇಷ ವೆಂದರೆ ಈ ಚಿತ್ರದ ಸಂಗೀತ ನಿರ್ದೇಶನ ಮಾಡಿದವರು ಹೆಸರಾಂತ ಗಾಯಕ ಪಿ.ಕಾಳಿಂಗರಾವ್ ಅವರು, ...... ಎಸ್.ಜಾನಕಿ,ಪಿ.ಬಿ.ಎಸ್., ಜಿಕ್ಕಿ,ಮೋಹನ್‌ಕುಮಾರಿಹಾಗೂ ಕಾಳಿಂಗರಾಯರು ಹಾಡುಗಳಿಗೆ ದನಿ ನೀಡಿದ್ದಾರೆ ಹಾಡುಗಳು ಒಂದಕ್ಕಿಂತ ಒಂದು ಮನಸ್ಸೆಳೆಯುತ್ತವೆ... ಹಾಗೂ ಈ ಹಾಡುಗಳು ಕೇಳಲು ಸಿಗುವುದು ಕಷ್ಟ...ಏಕೆಂದರೆ ಇದರ ವಿಡಿಯೋ ತುಂಬಾ ಹಾಳಗಿದೆ..ತುಂಬಾ ಕಟ್ ಹಾಗಿದೆ ಸಿನೆಮಾ ದ ಸಂಭಾಷಣೆ ಕೂಡ ಅರ್ದಂಬರ್ದ...ಎರಡೂ ಬಾರಿ ಸಿನೆಮಾ ನೋಡಿದರೂ ಅರ್ಥ ಮಾಡಿಕೊಳ್ಳಲು ತಿಣುಕಾಡಬೇಕು .... ಒಂದು ದೃಷ್ಯದಿಂದ ಮತ್ತೊಂದು ದೃಷ್ಯಕ್ಕೆ ಸಂಭಂದವೇ ಇರೋಲ್ಲ ಅಷ್ಟು ಕಟ್ ಆಗಿದೆ...ಹಾಡುಗಳೆಲ್ಲ ಅರೆಬರೆ....ಒಂದು ಸಮಾ...